ಸೋಮವಾರ 21 ಜೂನ್ 2010

ಮಳೆಗಾಲದ ಸುದ್ದಿ .........

ಬೆಂದ ಮಲೆನಾಡು
ಒಣಗಿದ ಮಲೆಕಾಡು
ಒಂದೇ ಸಮನೆ
ಜಟಿ ಜಟಿ
ಸುರಿವ ಮಳೆಗೆ ನೆಂದ ಸುದ್ದಿ
ಕರಾವಳಿಯ ಸೆರಗು
ವಿಶಾಲವಾಗಿ
ಬದಿ ಜನರು
ಮತ್ತಷ್ಟು
ಬದಿಗೆ ಸರಿದ ಸುದ್ದಿ......
ರಸ್ತೆ ಪಕ್ಕದ
ಚರಂಡಿಯಲ್ಲಿ
ರಕ್ಥದಂತಾ ನೀರು
ಹೊಳೆಯಾದ ಸುದ್ದಿ .....
ಸೇತುವೆ ಇಲ್ಲದ
ಊರಿನಲ್ಲಿ
ಶಾಲೆ ಮಕ್ಕಳ
ದೋಣಿ ಮಗುಚಿದ ಸುದ್ದಿ ....
ನಮ್ಮೂರ ಬಯಲಿನ
ಮುನ್ನೂರು ಗದ್ದೆಯೂ
ಹಸಿರ ಹೊದ್ದು
ನಗೆಯಾಡಿದ ಸುದ್ದಿ ....
ಗುಡುಗಿನಂತೆ
ಗದರುತ್ತಿದ
ಆನಂದ ಮಾಸ್ತರು
ಸಿಡಿಲಿಗೆ ಬಲಿಯಾದ ಸುದ್ದಿ .....
ಶಿವಮೊಗ್ಗೆಯಲ್ಲಿ
ಮಳೆ ಬಂದಾಗಲೆಲ್ಲ
ಬೆಂಗಳೂರಿನ ನನಗೆ
ಮಳೀಲಿ ನೆನಿ ಬೇಡ
ನ್ನುತ್ತಿದ್ದವಳಿಗೆ
ಮದುವೆಯಾದ ಸುದ್ದಿ ...
ಈ ಮಳೆಗಾಲದ ಖುಷಿಯ
ಸೀರೆಯಲ್ಲಿಯು
ನೋವಿನ ಹೂವುಗಳ
ಕಸೂತಿ ಕಲೆಗಳು

ಶನಿವಾರ 19 ಜೂನ್ 2010


ಭೈರಪ್ಪನವರು ಬರೆದ ಹೊಸ ಕಾದಂಬರಿ
"ಕವಲು" ಅವರು ಬರೆದ ಇದುವರೆಗಿನ ಎಲ್ಲ ಕಾದಂಬರಿಗಿಂತ ಸ್ವಲ್ಪ ಹೆಚ್ಚು ತೂಕದ ಕಾದಂಬರಿ ಅಂತ ಅವರ ಆಪ್ತರೊಬ್ಬರು ಹೇಳುತ್ತಾರೆ .. ಅವರು ಅದರ ಹಸ್ತಪ್ರತಿ ಓದಿದ್ದಾರೆ!ನನಗು ನಿರೀಕ್ಷೆ ಇದೆ .. ಅವರ ಈ ಕಾದಂಬರಿ ಕನ್ನಡ ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆ ನೀಡಲಿದೆ .. ಪ್ರಸ್ತುತ ದಿನಮಾನದ ಸಾಮಾಜಿಕ ಮತ್ತು ಕುಟುಂಬ ವ್ಯವಸ್ಥೆಯ ದುರವಸ್ಥೆಯನ್ನ ಕಾದಂಬರಿ ಕಟ್ಟಿ ಕೊಡುತ್ತದೆ ಅಂತ ಓದಿದ್ದೇನೆ .. ಯಾರೇನೆ ಅನ್ನಲಿ ಬೈರಪ್ಪನವರ ಪ್ರತಿ ಕಾದಂಬರಿಯು ಓದುಗನೊಳಗೆ ಹೊಸ ಹೊಳಹು ಒಂದನ್ನ ಅರಳಿಸುತ್ತದೆ .. ಆವರಣ ಬರೆದು ಮುಗಿಸಿದ ಕೆಲವೇ ದಿನದೊಳಗೆ ಅವರು ಅದರ ಆವರಣದಿಂದ ಹೊರ ಬಂದು ನೂತನ ಕಾದಂಬರಿಗೆ ದ್ಯಾನಿಸ ತೊಡಗಿದ್ದರು .. ಅದರ ಒಟ್ಟು ಮೊತ್ತವೇ "ಕವಲು " ಎಂಬುದು ನನ್ನ ಅನಿಸಿಕೆ .. s.l.b. ಯವರ ಪ್ರತಿ ಕಾದಂಬರಿಯು ಕೊಡ ಅವರ ತೀವ್ರವಾದ ಅದ್ಯಯನ ಶೀಲಥೆಯಿಂದ ಕೊಡಿರುವಂತದ್ದು.. ಹಾಗಾಗಿಯೇ ಅವರು ವಿಪುಲ ಓದುಗ ಬಳಗವನ್ನ ಪಡೆದರು .. ಅವರ ಒಂದು ಕಾದಂಬರಿ ಓದಿದರೆ ಒಬ್ಬ ಓದುಗ ಕನಿಷ್ಥ ೫೦ ಪುಸ್ತಕಗಳನ್ನ ಓದಿದ ಸಾರ್ಥಕ್ಯವನ್ನ ಹೊಂದುತ್ತಾನೆ ಎಂಬ ಮಾತಲ್ಲೇನು ಅತಿಶಯೋಕ್ತಿ ಇಲ್ಲ ..ಹಾಗೆ ಒಂದು ಓದುಗ ಬಳಗವನ್ನ ಪ್ರಜ್ಞಾವಂತರನ್ನಗಿಸುವ ಬರವಣಿಗೆಯನ್ನ ಅನುಸರಿಸಿಕೊಂಡು ಹೋಗುವ ಭೈರಪ್ಪನವರಂತ ಲೇಖಕರು ವಿರಳ ... ಇಸ್ಟೆಲ್ಲಾ ಹಿರಿಮೆಗಳಿದ್ದರು ಅವರೆಸ್ಟು ಸರಳ ! ಓದುಗ ಪ್ರಪಂಚ ಅವರ ಕಾದಂಬರಿಗಾಗಿ ಕಾತರದಿ ಕಾಯುತ್ತಿದೆ . ಸಾರಸ್ವತ ಲೋಕದಲ್ಲಿ ಹೊಸ ಸಂಚಲನ ಮೂಡುವ ಮೋಡ ಕಟ್ಟಿದೆ .. ಕಾದಂಬರಿ ಲೋಕದಲ್ಲಿ ಹೊಸ ಇತಿಹಾಸ ಮೂಡಿಸಿದ ಭೈರಪ್ಪನವರ "ಕವಲು" ಓದುಗರ ಹಸಿವನ್ನ ನೀಗಿಸುವಲ್ಲಿ ಸಮರ್ಥವಾಗಲಿ ಎಂದು ಆಶಿಸೋಣ ಏನಂತೀರಿ ????

ಶನಿವಾರ 6 ಫೆಬ್ರವರೀ 2010

ಕಡಮೆಯವರ ಕಥೆ ಮತ್ತು ಪತ್ರೊಡೆ .....!


ಇದ್ದಕ್ಕಿದ್ದಂತೆ ಪತ್ರೊಡೆ ತಿನ್ನಬೇಕು ಅನ್ನಿಸಿತು ... ಘಟ್ಟದ ಕಡೆಯೋರು ಪತ್ರೊಡೆ ಸಕತ್ತಾಗಿ ಮಾಡ್ತಾರೆ ಅಂತ ಕೇಳಿದ್ದೆ ..ನನ್ನ ಗೆಳತಿಯೊಬ್ಬಳಿಗೆ ಫೋನ್ ಮಾಡಿ ಪತ್ರೊಡೆ ಬೇಕು ಕಣೆ ಅಂದೇ ...ಆದ್ರೆ ನನಗೆ ಗೊತ್ತಿರಲಿಲ್ಲ ಅದಕ್ಕೆ ಕೆಸುವಿನ ಎಲೆ ಬೇಕು ಅಂತ .. ಅದು ಮಳೆಗಾಲದಲ್ಲಿ ಮಾತ್ರ ಸಿಗುವಂತದ್ದು..!!ಇದ್ದಕ್ಕಿದ್ದ ಹಾಗೆ ನನಗೆ ಪತ್ರೊಡೆಯ ನೆನಪಾಗಲಿಕ್ಕೆ ಕಾರಣವು ಇದೆ . ನಿಜ ಅದಕ್ಕೆ ಕಾರಣ ಸುನಂದಾ ಕಡಮೆ ...ಅವರ ಗಾಂದಿ ಚಿತ್ರದ ನೋಟುಗಳು ಎಬ ಕಥಾ ಸಂಕಲನದಲ್ಲಿರುವ 13 ಕಥೆಗಳಲ್ಲಿ ಪತ್ರೊಡೆ ಎಂಬ ಕಥೆ ಮೊದಲಿಗೆನೆ ಕಾಣಿಸುತ್ತದೆ . ಶಾಲಿನಿ ,ಮತ್ತು ಯಮುನಜ್ಜಿ ಪಾತ್ರಗಳು ಗಮನ ಸೆಳೆಯುವಂತಿದೆ ... ಎಂದೋ ತೀರಿ ಹೋದ ಯಮುನಜ್ಜಿ ಅಕ್ಕ ಗಂಗಜ್ಜಿಯ ಇಷ್ಟದ ತಿನಿಸಾದ ಪತ್ರೊಡೆಯನ್ನ ಆಕೆಯ ಶ್ರಾದ್ದದ ದಿನವಾದ ಅಂದು ಮಾಡಿ ಬಡಿಸ ಬೇಕು ಎಂಬ ಆಸೆ ಯಮುನಜ್ಜಿಗೆ ..... ಒಟ್ಟಿನಲ್ಲಿ ಶಾಲಿನಿಯ ಗೊಣಗಾಟದ ನಡುವೆಯೇ ಪತ್ರೊಡೆ ಮಾಡಿ ಪಿಂಡಕ್ಕೆ ಬಡಿಸುತ್ತಾಳೆ, ನಂತರ ಸೊಸೆ ಮಾಡಿದ ಪತ್ರೊಡೆ ರುಚಿಗೆ ಮನಸೋತು ಗಬ ಗಬನೆ ತಿನ್ನುವ ಯಮುನಜ್ಜಿ ಕಾ ಕಾ ಎನ್ನುವ ಕಾಗೆಯನ್ನ ಎಡ ಕೈನಿಂದ ಹಚ ಹಚ ಎಂದು ಓಡಿಸುತ್ತ ಪತ್ರೊಡೆಯ ಒಗರು ಒಗರು ರುಚಿಗೆ ಮರುಳಾಗಿ ಅದನ್ನ ತಿನ್ನೋದು ...ಕಥೆಯ ಬಗ್ಗೆ ಇನ್ನೊಮ್ಮೆ ಮಾತಾಡೋಣ ..ನಂಗೆ ಈ ಕಥೆ ಓದಿ ಮುಗಿಸಿದ ಮೇಲೆ ಪತ್ರೊಡೆ ತಿನ್ನ ಬೇಕು ಅಂತ ಆಸೆಯಾಗ್ತಾ ಇದೆ ..ಅಂದ ಹಾಗೆ ಅದೇ ಸಂಕಲನದಲ್ಲಿ ಇನ್ನು ಹಲವಾರು ಚಂದದ ಕಥೆಗಳಿವೆ ಅದು ಕಡಮೆಯವರ ೨ನೆ ಕಥಾ ಸಂಕಲನ ಪ್ರಥಮ ಮುದ್ರಣ ೨೦೦೮ ರಲ್ಲಾಗಿದೆ ಸಿಕ್ಕರೆ ಅಕ್ಕರೆಯಿಂದ ಕೈಗೆತ್ತಿಕೊಳ್ಳಿ

ಶುಕ್ರವಾರ 5 ಫೆಬ್ರವರೀ 2010

ಹಾಗೊಂದು ಭವಿಷ್ಯ ನಿಜವಾಗುವುದೇ ...?!




6.4 ಬಿಲಿಯನ್ ಕಣ್ರೀ " ಇದು ಚೀನಾದ ಅದ್ಯಕ್ಷನ ಉದ್ಗಾರವಾಗಿರ ಬಹುದು .....ಅದೇನು ಆರು ಬಿಂದು ನಾಲಕ್ಕು ಬಿಲಿಯನ್ ? ಬರೇ ದುಡ್ದಲ್ಲ ಸ್ವಾಮಿ ಅದು ಆ ಮೊತ್ತದ ಶಸ್ತ್ರಾಸ್ತ್ರ ಮಾರಾಟಕ್ಕೆ ಅಮೇರಿಕಾ ತೈವಾನ್ಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ .... ನಿಮಗೂ ಗೊತ್ತಿರಲಿಕ್ಕು ಸಾಕು ಈ ಮುಕೆಡಿ ಚೀನಾಕ್ಕೂ ದ್ವೀಪ ರಾಷ್ಟ್ರ ತೈವಾನ್ ಗು ಎಂದಿಗೂ ಮುಗಿಯದ ವೈಷಮ್ಯ ..ಅಮೆರಿಕಾದ ಈ ನೀತಿಗೆ ಮುನಿಸಿಕೊಂಡಿರುವ ಚೀನಾ ಅಮೇರಿಕಾದ ವಿರುದ್ದ ಹಲ್ಲು ಕಡಿಯುತ್ತಿದೆ ಆದರೆ ಅಮೇರಿಕಾ ಮಾತ್ರ ಮುಸಿ ಮುಸಿ ನಗುತ್ತಿದೆ .....ಅದು ೧೯೪೯ ರ ಕಾಲ ಅದೇ ಹೊತ್ತಿನಲ್ಲಿ ಚೀನಾ ಮತ್ತು ತೈವಾನ ಪ್ರತ್ಯೇಕ ಸರ್ಕರಗಳಾಗಿದ್ದವು ಒಂದು ಪುಟ್ಟ ದ್ವೀಪ ರಾಷ್ಟ್ರವಾದರೂ ತೈವಾನ ವಿಶ್ವದ ಪ್ರಮುಕ ರಾಷ್ಟ್ರಗಳ ಬೆಂಬಲ ಪಡೆದು ಚೀನಾ ವಿರುದ್ದ ಸಡ್ಡು ಹೊಡೆಯುತ್ತಲೇ ಬಂದಿತು . ಅದು ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿತು ಈ ನಡೆಯಿಂದಾಗಿ ಅಮೇರಿಕಾ ಮತ್ತು ಚೀನಾದ ನಡುವೆ ಕದನದ ಕಲೆ ಮೂಡಿದೆ . ಎರಡೋ ರಾಷ್ಟ್ರದ ಪ್ರಮುಖರೂ ಕೊಡ ಬುದ್ದಿವಂತರೇ ಆದರು ನೆನಪಿರಲಿ ಈ ಎರಡೋ ರಾಷ್ಟ್ರವು ಕೊಡ ಕುತಂತ್ರ ತನಕ್ಕೆ ಹೆಸರುವಾಸಿ .....ಸದ್ಯದ ದಿನಮಾನದ ಪರಿಸ್ಥಿತಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದರೆ ಬಾರತ ಮತ್ತು ಚೀನಾದ ನಡುವೆ ಶೀತಲ ಸಮರ ನಡೆಯುತ್ತಿತ್ತು . ಲಾಮಾರ ಪ್ರಮುಖ ಮುಕಂಡ ದಲೈ ಲಾಮರ ಕೋರಿಕೆಯ ಮೇರೆಗೆ ಟಿಬೆಟಿಯನ್ನರಿಗೆ ಆಶ್ರಯ ನೀಡಿತ್ತು ಭಾರತ (ಮುಂದಿನ ದಿನದಲ್ಲಿ ಇವರಿಂದಲೂ ನಮಗೆ ತೊಂದರೆ ಇದೆ ಕಣ್ರೀ) ಈ ಕ್ರಮ ಚೀನಾ ಮತ್ತು ಭಾರತದ ಸಂಬಂದ ಹದಗೆಡಲು ಪ್ರಮುಖ ಕಾರಣವು ಆಗಿತ್ತು ..ಅದೇ ದಲೈ ಲಾಮರವರು ಮತ್ತು ಅಮೇರಿಕಾದ ಅದ್ಯಕ್ಷ ಬರಾಕ್ ಒಬಾಮ ಬೇಟಿಯಾಗುವ ದಿನಗಳು ನಿಗದಿಯಾಗಿದ್ದು ಚೀನಾದ ಅಸಮಾಧಾನಕ್ಕೆ ಕಾರಣವಾಗಿದೆ ಇದರ ನಡುವೆಯೇ "ಅದೇನೇ ಆದರು ಲಾಮರೊಂದಿಗಿನ ಬೇಟಿಯನ್ನ ಕೈ ಬಿಡಲಾಗದು " ಎಂಬ ವರದಿ ಅಮೇರಿಕಾದ ಶ್ವೇತ ಭವನದಿಂದ ಹೊರ ಬಿದ್ದಿದೆ ಇದು ಚೀನಾ ತನಗಾದ ಅವಮಾನ ಎಂದು ಪರಿಗಣಿಸಿದೆ ಎಂಬುದು ಒಂದು ವಲಯದ ಲೆಕ್ಕಾಚಾರ ....


ಶಕುನಿ ಕಾರ್ಯ ತಂತ್ರಕ್ಕೆ ಮೊದಲ ಸ್ಥಾನದಲ್ಲಿರುವ ಚೀನಾ ಮತ್ತು ಅಮೆರಿಕಾದ ಸಂಬಂದಗಳು ಹೀಗೆ ಹದಗೆಡುತ್ತಲೇ ಮುಂದುವರಿದರೆ ಮುಂದಿನ ಪರಿಣಾಮ ಮಾತ್ರ ಗಂಬೀರವಾಗಿರುತ್ತದೆ !! ಇದರ ನಡುವೆಯೇ "ವಿಶ್ವದ ಕೆಲವು ಹಿರಿ ಕಿರಿಯ ರಾಷ್ಟ್ರಗಳು ರಣರಂಗದಲ್ಲಿ ಸೊರಗಿ ಹೋಗುತ್ತವೆ ಅದರ ನಂತರ ಭಾರತ ವಿಶ್ವದ ಪ್ರಮುಖ ರಾಷ್ಟ್ರವಾಗಿ ಒಡಮೂಡುತ್ತದೆ " ಎಂಬ ಭವಿಷ್ಯ ವಾಣಿಯೊಂದು ಗಿರಕಿ ಹೊಡೆಯುತ್ತಿದೆ ... ಆಗೋದೆಲ್ಲ ಒಳ್ಳೇದಕ್ಕೆ ಏನಂತೀರಿ ????

ಗುರುವಾರ 7 ಜನವರೀ 2010


ಅದೆಂತದ್ದೆ ಕೆಲಸವಿದ್ದರೋ ಕೂಡ
ಒಂದಿಸ್ಟು ಬಿಡುವು ಮಾಡಿಕೊಂಡು
ನದಿಯ ನೆನಪಿನ ಹಂಗು
ಎಂಬ ಜೋಗಿಯ ಮೊದಲ
ಕಾದಂಬರಿ ಓದಿ ಅದು ನಿಮ್ಮನ್ನ
ಗುಂಗಾಗಿ ಕಾಡದಿದ್ದರೆ
ನನ್ನ ಮೇಲಾಣೆ ......

ಗೋರಿ ತಲುಪುವ ಮೊದಲೇ ಗುರಿ ತಲುಪೋಣ ...

ಹಿಂದಿ ಭಾಷೆಯ ಖ್ಯಾತ ಕವಿ ಗುಲ್ಜಾರ್ ರವರ ಒಂದು ಕವಿತೆಯ ಭಾವಾರ್ಥ ಹೀಗಿದೆ "ನಾನು ಬದುಕಿಗಿಂತ ಸಾವನ್ನ ಪ್ರೀತಿಸುತ್ತೇನೆ .. ಯಾಕೆಂದರೆ ಬದುಕು ಮತ್ತೆ ಮತ್ತೆ ಹೊಡೆಯುತ್ತದೆ ಆದರೆ ಸಾವು ಒಂದೇ ಬಾರಿ ಹೊಡೆದು ಬಿಡುತ್ತದೆ !... ಮೇಲಿನ ಸಾಲುಗಳನ್ನ ಓದಿದ ತಕ್ಷಣ ಸತ್ಯ ಅನ್ನಿಸಿ ಬಿಡುತ್ತದೆ ..ಸಾವೆಂಬುದು ಅವರವರ ಭಾವಕ್ಕೆ ಅವರವರ ಭಕುತಿಗೆ !!!!" ಒಂದಲ್ಲ ಒಂದು ದಿನ ಬೇಟಿಯಾಗಲೇ ಬೇಕಾದ ಶತ್ರುವೇ ಸಾವು" ಅನ್ನೋರ ನಡುವೆಯೇ "ಸಾವೇ ಅಂತಿಮ ಮಿತ್ರ " ಎಂದು ಸಾರುವವರು ಇಲ್ಲವೆಂದಲ್ಲ !!......ಹಾಗೆ ನೋಡಿದರೆ ನಮ್ಮ ಪುರಾಣದಲ್ಲಿ, ಇತಿಹಾಸದಲ್ಲಿ ಸಾವನ್ನ ಹಿಂಬಾಲಿಸಿ, ಸಾವನ್ನ ಬೆಂಬಲಿಸಿ ನಡೆದು ಹೋದವರು ಕೆಲವೇ ಕೆಲವು ಋಷಿ ಮುನಿಗಳು ಹಾಗು ಸಾದು ಸಂತರು ಮಾತ್ರ . ಸಾವು ಒಂದಲ್ಲ ಒಂದು ದಿನ ಬಂದೆ ಬರುತ್ತದೆ ಅದೆಂದಿಗೂ ಯಾರನ್ನೋ ಬಿಡಲಾರದು . ಕಾಲವೆಂಬ ಮಾಯಾ ಜಿಂಕೆ ಎಲ್ಲದಕ್ಕೂ ಉತ್ತರ ನೀಡುತ್ತ ಎಲ್ಲವನ್ನೂ ಅಂತ್ಯಗೊಳಿಸುತ್ತಸಾಗುತ್ತದೆ ...ಜನನ ಮರಣದ ಚಕ್ರ ಸುತ್ತುತ್ತಲೇ ಇರುತ್ತದೆ ..ಯಾರೋ ಕೊಡ ಜವರಾಯನ ಕರೆಯಿಂದ ವಂಚಿತರಾಗೊದಿಲ್ಲ ಎಂಬುದಂತೂ ದಿಟ ...ನಿನ್ನೆ ಅವನು ಇಂದು ಇವನು ನಾಳೆ ನಾನು ಎಂಬುದು ನಮ್ಮಲ್ಲಿರಬೇಕಾದ ಜಾಗ್ರತಪ್ರಜ್ಞೆ ನಾವೇನು ಸಾವಿರಾರು ವರ್ಷ ಇಲ್ಲಿ ಬದುಕಿರೋದಿಲ್ಲ ಆದರೆ ಇರುವ ಪುಟ್ಟ ಅವದಿಯಲ್ಲೇ ದೊಡ್ಡ ಸಾದನೆ ಮಾಡಲು ಬೇಕಾದಷ್ಟು ಶಕ್ತಿ ಸಾಮರ್ಥ್ಯ ನಮ್ಮಲ್ಲಿರುತ್ತದೆ . ಈ ಕ್ಷಣ ಮರುಕ್ಷಣ ಮರಣ ಹೊದುವಂತದ್ದುನಾವು ಕಳೆಯುವ ಪ್ರತಿ ಕ್ಷಣವೂ ಕೂಡ ನಮ್ಮ ಆಯಸ್ಸನ್ನು ತಿಂದು ಮುಂದೆ ಸಾಗಿರುತ್ತದೆ ಅರ್ಥಾತ್ ನಮ್ಮನ್ನ ಅದು ನಿರಂತರವಾಗಿ ಸಾವಿನ ಮನೆಯತ್ತ ಸೆಳೆದೊಯ್ಯುತ್ತಿರುತ್ತದೆ ಹಾಗೆಂದ ಮೇಲೆ ಸಮಯವನ್ನ ವ್ಯರ್ಥ ಮಾಡೋದು ಅಂದರೆ ನಾವು ವಿವೇಚನಾ ರಹಿತರಾಗಿ ಬದುಕೋದು ಅಂತಲೇ ಅರ್ಥ ......ಹಿರಿಯರೆಲ್ಲ ಮಾತಾಡೋದನ್ನ ಕೇಳಿರುತ್ತೇವೆ " ನಾನು ಸಾಯೋದ್ರೊಳಗೆ ಮಗಳಿಗೊಂದು ಮಾಡುವೆ ಮಾಡಿಸ ಬೇಕು " ಅಂತಲೋ " ಕಣ್ಣು ಮುಚ್ಚೋದ್ರೊಳಗೆ ಮನೆ ಕಟ್ಟಾ ಬೇಕು" ಅಂತಲೋ ಒಂದು ಗುರಿಯ ಬಗ್ಗೆ ಮಾತಾಡುತ್ತಿರುತ್ತಾರೆ .... ನಿಜ ನಾವು ಗೋರಿ ಸೇರುವ ಮೊದಲೇ ಗುರಿ ತಲುಪ ಬೇಕು . ನಮಗೊಂದು ಗುರಿ ಇಲ್ಲದೆ ಹೋದರೆ ನಾವು ಬದುಕೋದೇ ವ್ಯರ್ಥ ಬರಿ ಗುರಿ ಇರಿಸಿಕೊಂಡು ಆ ದಿಕ್ಕಿನೆಡೆಗೆ ಪ್ರಯತ್ನ ಮಾಡದೆ ಇದ್ದರೆ ಅದೋ ಕೊಡ ವ್ಯರ್ಥ .. ಸತ್ತರೇನು ಸುಡುಗಾಡು ಸುಖ ಇದ್ದು ಜೈಸ ಬೇಕು ಎಂಬ ಮಾತು ಸುಮ್ಮನೆ ಹುಟ್ಟಿಕೊಂಡದ್ದಲ್ಲ . ಸಾವೆಂಬುದು ಶಾಶ್ವತ ಸತ್ಯ ಆ ಸತ್ಯ ಘಟಿಸುವ ಮೊದಲು ನವಿ ಗೆಲ್ಲ ಬೇಕು .ಇನ್ಯರಿಗಾಗಿಯೋ ಅಲ್ಲದಿದ್ದರೂ ಅದು ಸ್ವತ ನಮಗಾದರೂ ಒಂದಿಷ್ಟು ಆತ್ಮ ಸಂತೃಪ್ತಿಯನ್ನ ಒದಗಿಸಿ ಕೊಡಬೇಕು .ಅಪ್ಪ ಅಮ್ಮ ಜನ್ಮ ಕೊಟ್ಟ ತಪ್ಪಿಗೆ ಬದುಕಿ ಹಾಗೆಯೇ ಸತ್ತು ಹೋದರೆ ಆ ಬದುಕಿಗೆ ಮತ್ತು ಆ ಸಾವಿಗೆ ಖಂಡಿತ ಬೆಲೆ ಇಲ್ಲ ನಾವು ಸತ್ತಮೇಲೆ ನಾಲ್ಕಾರು ಜನ ಛೆ ಈತ ಸಾಯಬಾರದಿತ್ತು ಯೆಮುದಾಗಿ ಹೇಳಿಕೊಳ್ಳಬೇಕುಹಾಗೆ ಸತ್ತ ಮೇಲು ಕೂಡ ಜನ ಮಾನಸದಲ್ಲಿ ಬದುಕೊದಿದೆಯಲ್ಲ ? ಅದು ನಿಜಕ್ಕೂ ಒಬ್ಬ ಯಶಸ್ವಿ ಮನುಷ್ಯನ ಲಕ್ಷಣ ಬದುಕಿನ ಅವದಿ ಚಿಕ್ಕದಾದರೂ ಅಲ್ಲಿ ಸಾದನೆಯ ಪಾಲು ದೊಡ್ದದಾಗಿರ ಬೇಕು ಅದಕ್ಕೆ ಉದಾಹರಣೆ ಸ್ವಾಮಿ ವಿವೇಕಾನಂದರು ...ಪುರಾಣದ ಪುಟವನ್ನ ಗಮನಿಸಿದರೆ ವೀರ ಅಬಿಮನ್ಯು ..ನಿಜ ಒಂದು ಗುರಿ ಇರಿಸಿಕೊಂಡು ಅದನ್ನ ತಲುಪಿ ನಂತರ ಮತ್ತೊಂದರತ್ತ ದ್ರಸ್ಟಿ ಬೀರೋದು ಮತ್ತೆ ಮತ್ತೆ ಯಶಸ್ಸನ್ನ ಹುಡುಕಿಕೊಂಡು ಹೊರಡೋದು ಶ್ರೇಷ್ಟ ಮನಸ್ಸಿನ ಗುಣ ಲಕ್ಷಣ ......
ಹೇಗೆ ಬಿಟ್ಟ ಬಾನಗಳೆಲ್ಲ ಗುರಿ ತಲುಪಲಾರವೋ ಹಾಗೆಯೇ ಪ್ರತಿ ಬಾರಿಯೂ ಗುರಿ ತಲುಪೋದು ನಮಗೋ ಕಷ್ಟವಾಗೊತ್ತೆ ಮತ್ತೆ ಮತ್ತೆ ಸಾಲುಗಳು ಕಾಲು ತಡವುತ್ತವೆ ಆದರೆ ನೆನಪಿರಲಿ ಸೋಲುಗಳ ಅನುಭವ ಗುರಿಯತ್ತ ಮುನ್ನುಗ್ಗಲು ನಮ್ಮನ್ನ ಇನ್ನಷ್ಟು ಗಟ್ಟಿಗೊಳಿಸುತ್ತವೆ.......ಸೋಲಿನ ವಿರುದ್ದ ಕಾದಾಡುವ ಹುಮ್ಮಸ್ಸು ನಮ್ಮೊಳಗೇ ಭುಗಿಲೆಳಬೇಕು .. ಆಗ ಒಂದಲ್ಲ ಒಂದು ಬಾರಿಯಾದರೂ ನೀವು ಗೆದ್ದೇ ಗೆಲ್ಲುತ್ತೀರಿ ಒಂದು ವೇಳೆ ಗೆಲ್ಲಲಾಗದಿದ್ದರು ಸೋಲಿನ ಇದಿರು ಸುಲಬವಾಗಿ ತಲೆ ತಗ್ಗಿಸಲಿಲ್ಲ ಎಂಬ ಹೆಮ್ಮೆಯಾದರು ನಿಮ್ಮದಾಗುತ್ತದೆ ....ಹುಟ್ಟಿದವರೆಲ್ಲ ಸಾಯುತ್ತಾರೆ ನಿಜ ಆದ್ರೆ ಸತ್ತೂ ಬದುಕುವವರು ವಿರಳ ಹಾಗೆ ಸತ್ತೂ ಕೊಡ ನಮ್ಮ ಮನೋ ಮಂದಿರದಲ್ಲಿ ಬದುಕುವವರೇ ನಿಜವಾದ ಸಾಧಕರು ಆ ಸಾಲಿನಲ್ಲಿ ತೀರ ಮೊನ್ನೆ ಮೊನ್ನೆ ಅಗಲಿ ನೆನಪಾಗಿ ಹೋದ ಸಿ.ಅಶ್ವತ್ ಮತ್ತು ಸಾಹಸ ಸಿಮ್ಮ ವಿಷ್ಣುವರ್ದನ್ ಕೊಡ ಇದ್ದಾರೆ ಎಂಬುದು ನೆನಪಿರಲಿ .....

ಗಮನಿಸಿರಲಿಲ್ಲ .........!

ನೀನು ಮರಳಿ ನಡೆದಾಗ
ನಿನ್ನ ಪಾದ ತಾಕಿದ ಮಣ್ಣನ್ನು
ನಾನು ಕಣ್ಣಿಗೊತ್ತಿಕೊಂಡೆ
ಮಣ್ಣು ಒದ್ದೆಯಾಗಿತ್ತು
ನೀನು
ಗಮನಿಸಿರಲಿಲ್ಲ .......!
ನಿನಗೆ ಗುಲಾಬಿ ನೀಡುತ್ತಿದ್ದಾಗ
ನನ್ನ ಕೈಗೆ ಅದರ ಮುಳ್ಳು ತಾಕಿ
ರಕ್ತ ಒಸರುತ್ತಿತ್ತು
ಗುಲಾಬಿ ರಂಗಿನ ಗುಂಗಲ್ಲಿ
ನೀನು
ಗಮನಿಸಿರಲಿಲ್ಲ ........!
ನೀನು ಹೊರಟೆ .....ಎಂದಾಗ
ನನ್ನ ಹೃದಯ ಚೋರಾಗಿತ್ತು
ಮನಸಿನ ಕನ್ನಡಿ ಒಡೆದಿತ್ತು
ನನ್ನ ಹೃದಯ ವೆದನೆಯನ್ನ
ನೀನು ಗಮನಿಸಿರಲಿಲ್ಲ ......!

ರವಿವಾರ 27 ಡಿಸೆಂಬರ್ 2009

ಜೋಗಿಯವರ ಮೂರು ಮುತ್ತುಗಳು

ಇಂದು ಜೋಗಿಯವರ ಮೂರು ಪುಸ್ತಕಗಳು ಬಿಡುಗಡೆ ಗೊಂಡಿವೆ ...ಕಥಾಸಮಯ, ರವಿ ಕಾಣದ್ದು ,ಮತ್ತು ಜೋಗಿ ಮನೆ .....ಅಂಕಿತ ಪುಸ್ತಕದವರು ತುಂಬಾ ಚಂದದ ಕಾರ್ಯಕ್ರಮ ಆಯೋಜಿಸಿಕೊಂಡಿದ್ದರು .. ಪತ್ರಕರ್ತ ರವಿ ಬೆಳೆಗೆರೆ ,ಶತಾವದಾನಿ ಗಣೇಶ್ ,ಮತ್ತು ನಟ ಪ್ರಕಾಶ್ ರೈ ಜೊತೆಗೆ ಜೋಗಿಯವರು ವೇದಿಕೆ ಹಂಚಿ ಕೊಂಡರು..ಜೋಗಿಮನೆ ಜಾನಕಿ ಕಾಲಂನ ಬರಹಗಳಾದರೆ,ಕಥಾಸಮಯ ಓ ಮನಸೇಯಲ್ಲಿ ಬೆಳಕು ಕಂಡಿದ್ದ ಪುರಾಣ ಪಾತ್ರಗಳ ಪರಿಚಯ ... ಇದರ ಜೊತೆಗೆ ಗಮನ ಸೆಳೆದ ಪುಸ್ತಕ 'ರವಿ ಕಾಣದ್ದು 'ಹಾಯ್ ಬೆಂಗಳೋರ್ ಪತ್ರಿಕೆಯಲ್ಲಿ ಪ್ರಕಟಗೊಂಡ ಜೋಗಿಯವರ ಸಾಹಿತ್ಯ ಯಾತ್ರೆಯ ಆರಂಬದ ದಿನದ ಲೇಖನಗಳು ಒಂದಕ್ಕಿಂತ ಒಂದು ಮಿಗಿಲೆಬಂತಿದೆ .... ಆರಂಬದ ಬರವಣಿಗೆಯಲ್ಲೇ ಜೋಗಿಯವರು ತನ್ನ ತನವನ್ನ ಛಾಪಿಸುತ್ತ ನಡೆದು ಬಂದದ್ದು ನಿಜಕ್ಕೂ ಅಚ್ಚರಿ !!ನಾವೆಲ್ಲಾ ಓದಲೇ ಬೇಕಾದ ಪುಸ್ತಕ "ರವಿ ಕಾಣದ್ದು"....ಅಂದ ಹಾಗೆ ಅಪಾರ ರವರ ಮುಖ ಪುಟ (ಮೂಕ ಮಾತು ) ಪುಸ್ತಕಕ್ಕೆ ಚಂದದ ಅಂಗಿ ತೊಡಿಸಿದೆ ...ಪುಸ್ತಕ ಮಾರುಕಟ್ಟೆಯಲ್ಲಿದೆ ಓದಿ ಅದರ ಬಗ್ಗೆ ಚರ್ಚೆ ಮಾಡೋಣ

ಶನಿವಾರ 26 ಡಿಸೆಂಬರ್ 2009

ಜೋಗಿ ಕತೆ ಕೊನೆಯಗೋಲ್ಲ .....

ಗಳಗನಾಥರು ಬೆಚ್ಚಿ ಬಿದ್ದರು ! ಎಂಬ ಸಾಲನ್ನ ಓದುತ್ತಿದ್ದಂತೆಯೇ ನಿಮ್ಮ ಮುಂದೆ ಪ್ರಶ್ನೆಯೊಂದು ಮೋಡಿಯೇ ಇರುತ್ತದೆ .ಯಾಕೆ? ... ಅದಕ್ಕಿಂತ ಮುಂಚೆಯೇ ಆ ಕಥೆಯೇ ಹೆಸರು ಕನ್ನಡಿಯೊಳಗೆ ಗಳಗನಾಥರಿಲ್ಲ .. ಎಂಬುದನ್ನ ಓದುತ್ತಿದ್ದಂತೆಯೇ ಕಥೆಯನ್ನ ಓದಲೇ ಬೇಕು ಅಂತ ಅನ್ನಿಸುತ್ತದೆ ..ಮಾಮೂಲಿನಂತೆ ಕನ್ನಡಿಯ ಮುಂದೆ ನಿಂತ ಗಳಗನಾಥರಿಗೆ ಕನ್ನಡಿಯಲ್ಲಿ ತನ್ನ ಮುಕ ಕಾಣಿಸಲಿಲ್ಲ ಕಣ್ಣು ಮಂಜಾಗಿರ ಬೇಕು ಅನ್ನಿಸಿ ಬೇರೆಡೆ ಗಮನಿಸುತ್ತಾರೆ ಎಲ್ಲವೋ ಮಾಮೂಲಿನಂತೆ ಇದೆ !!ಆದರೆ ಕನ್ನಡಿಯಲ್ಲಿ ಮಾತ್ರ ಅವರಿಗೆ ಅವರು ಕಾಣಿಸುತ್ತಿಲ್ಲ ..ಗಳಗನಾಥರೋಬ್ಬರನ್ನ ಬಿಟ್ಟು ಕನ್ನಡಿಯಲ್ಲಿ ಬೇರೆಲ್ಲ ಕಾಣಿಸುತ್ತದೆ .ಗಳಗನಾಥರು ಬೆಚ್ಚಿ ಬೀಳುತ್ತಾರೆ .....ಸಾಕಷ್ಟು ಅಪರೊಪದ ಕಥೆಗಳನ್ನ ಒದಗಿಸಿದ ಜೋಗಿಯವರ ಕನ್ನಡಿಯೊಳಗೆ ಗಳಗನಾಥರಿಲ್ಲ ಎಂಬ ಕಥೆ ಆರಂಬದಿಂದ ಅಂತ್ಯದ ತನಕವೋ ನಮ್ಮನ್ನ ಕುತೊಹಲದಲ್ಲಿ ಕೆಡಹುತ್ತದೆ....ಸಣ್ಣ ಕಥೆಯೊಂದು ನಮ್ಮೊಳಗೇ ದೊಡ್ಡ ಹೊಳಹನ್ನ ಮೂಡಿಸುತ್ತದೆ ...ಕಥೆಯಲ್ಲಿ ಗಳಗನಾಥರು ಬದುಕಿಯೇ ಇರುತ್ತಾರೆ ..ಶಾಸ್ತ್ರಿಗಳಲ್ಲಿ ಮಾತಾಡಿ ಅನುಮಾನ ಪರಿಹರಿಸಿ ಕೊಳ್ಳೋಣವೆಂದು ಕೇಳುತ್ತಾರೆ "ತಮ್ಮ ಹಳೆಯೇ ಪರಿಚಯದೊಬ್ಬರಿಗೆ ಕನ್ನಡಿಯಲ್ಲಿ ಅವರ ಮುಕ ಅವರಿಗೆ ಕಾಣಿಸೋದಿಲ್ಲವಂತೆ !" ಎನ್ನುತ್ತಾರೆ ಅದಕ್ಕೆ ಶಾಸ್ತ್ರಿಗಳು "ಆ ಹೊತ್ತಿಗೆ ಅದು ಹಾಗೆ "ಎಂದಾಗ ಗಳಗ ನಾಥರು ತಲೆ ಕೆಡಿಸಿ ಕೊಳ್ಳುತ್ತಾರೆ
ಆ ಹೊತ್ತಿಗೆ ಅಂದರೆ ಯಾವ ಹೊತ್ತಿಗೆ ? ಸಾಯುವ ಕಾಲಕ್ಕೆ ಎಂದಿರ ಬಹುದೇ ?ಸತ್ತ ಮೇಲೆ ಈ ದೇಹ ಇರುವೊದಿಲ್ಲವಂತೆ ಮನಸ್ಸು ಮಾತ್ರ ಓಡಾಡುತ್ತ ಇರೋತ್ತಂತೆ . ಹಾಗಿದ್ದರೆ ತಾನು ಸತ್ತು ಹೋಗಿರ ಬಹುದೇ ?ಹಾಗಿದ್ದರೆ ಬೇರೆಯವರಿಗೆ ಯಾಕೆ ಕಾಣಿಸುತ್ತಿದ್ದೇನೆ? ಅವರ ಪಾಲಿಗೆ ಬದುಕಿ ,ತನ್ನ ಪಾಲಿಗೆ ಸತ್ತು ಹೋಗಿದ್ದೆನಾ? ಹಾಗಾಗಲು ಸಾದ್ಯವೇ ?ಇನ್ನೊಬ್ಬರಿಗಸ್ಟೇ ಯಾರಾದರು ಬದುಕಿರುತ್ತಾರ ? ಹಾಗಿದ್ದರೆ ನನಗಸ್ಟೇ ಬದುಕಿದ್ದು ಇನ್ನೊಬ್ಬರ ಪಾಲಿಗೆ ಸತ್ತಂತಿದ್ದರೆ ನಾನು ನನಗೆ ಮಾತ್ರ ಕಾಣಿಸುತ್ತೆನಾ ? ಹೀಗೆ ಉತ್ತರವೇ ಸಿಗದ ಪ್ರಶ್ನೆಗಳಲ್ಲಿ,ಗೊಂದಲದಲ್ಲಿ ಮುಳುಗಿ ಹೋಗುವ ಗಳಗನಾಥರು ಮರಳಿ ಮನೆಗೆ ಬಂದು ಕನ್ನಡಿ ನೋಡುತ್ತಾರೆ ಆಗಲು ಅವರಿಗೆ ಅವರು ಕಾಣಿಸೋದಿಲ್ಲ ಆದರೆ ಹಿಂದೆ ಬಂದು ನಿಂತ ಹೆಂಡತಿಯ ಮುಖ ಕಾಣಿಸುತ್ತದೆ ...ಎದುರಿಗೆ ನಿಂತ ತನ್ನನ್ನು ನೋಡಿದರೋ ನೋಡದ ಹಾಗೆ ಸುಮ್ಮನಿದ್ದವಳನ್ನು ಕಂಡು ಗಳಗನಾಥರಿಗೆ ಗಾಬರಿಯಾಯಿತು ಏನೋ ಹೇಳಲು ಯತ್ನಿಸಿದರು ಏನೋ ಹೇಳಲಿಲ್ಲ ಅನ್ನಿಸಿತು ..ಹೆಂಡತಿ ಒದ್ದೆ ಕೂದಲನ್ನು ಬಿಚ್ಚಿ ಹರಡಿ ಕೊಳ್ಳುತ್ತಾ ಮಗಳನ್ನು ಕೇಳಿದರು "ಅಪ್ಪ ಎಲ್ಲಿಗೆ ಹೋಗ್ತೀನಿ ಅಂದ್ರು ?ಮಗಳು 'ಗೊತ್ತಿಲ್ಲ' ಎನ್ನುತ್ತಾಳೆ ಅಲ್ಲಿಗೆ ಕಥೆ ಮುಗಿಯುತ್ತದೆ ಮತ್ತೆ ಅದು ನಮ್ಮೊಳಗೇ ಬೆಳೆಯುತ್ತದೆ ಓದಿದ ಎಲ್ಲರ ಒಳಗೂ ಬೇರೆ ಬೇರೆ ಕತೆಯಾಗಿ ,ಸಂದೆಹವಾಗಿ .ಬೆಳೆಯುತ್ತಲೇ ಹೋಗುತ್ತದೆ ..ಜೋಗಿಯವರ ಕಥೆಯ ಸಾರ್ಥಕತೆಯೇ ಅದು .....ಅವರ ಕಥೆಗಳು ಕೊನೆಯಗೋದೇ ಇಲ್ಲ
ಕಥೆಯನ್ನ ಕೊನೆ ಮಾಡುವ ಕಥೆಗಾರ ಒಂದರ್ಥದಲ್ಲಿ ಕೊಲೆಗಾರ ...ಏನಂತೀರಿ ?.....