ಶನಿವಾರ 6 ಫೆಬ್ರವರೀ 2010

ಕಡಮೆಯವರ ಕಥೆ ಮತ್ತು ಪತ್ರೊಡೆ .....!


ಇದ್ದಕ್ಕಿದ್ದಂತೆ ಪತ್ರೊಡೆ ತಿನ್ನಬೇಕು ಅನ್ನಿಸಿತು ... ಘಟ್ಟದ ಕಡೆಯೋರು ಪತ್ರೊಡೆ ಸಕತ್ತಾಗಿ ಮಾಡ್ತಾರೆ ಅಂತ ಕೇಳಿದ್ದೆ ..ನನ್ನ ಗೆಳತಿಯೊಬ್ಬಳಿಗೆ ಫೋನ್ ಮಾಡಿ ಪತ್ರೊಡೆ ಬೇಕು ಕಣೆ ಅಂದೇ ...ಆದ್ರೆ ನನಗೆ ಗೊತ್ತಿರಲಿಲ್ಲ ಅದಕ್ಕೆ ಕೆಸುವಿನ ಎಲೆ ಬೇಕು ಅಂತ .. ಅದು ಮಳೆಗಾಲದಲ್ಲಿ ಮಾತ್ರ ಸಿಗುವಂತದ್ದು..!!ಇದ್ದಕ್ಕಿದ್ದ ಹಾಗೆ ನನಗೆ ಪತ್ರೊಡೆಯ ನೆನಪಾಗಲಿಕ್ಕೆ ಕಾರಣವು ಇದೆ . ನಿಜ ಅದಕ್ಕೆ ಕಾರಣ ಸುನಂದಾ ಕಡಮೆ ...ಅವರ ಗಾಂದಿ ಚಿತ್ರದ ನೋಟುಗಳು ಎಬ ಕಥಾ ಸಂಕಲನದಲ್ಲಿರುವ 13 ಕಥೆಗಳಲ್ಲಿ ಪತ್ರೊಡೆ ಎಂಬ ಕಥೆ ಮೊದಲಿಗೆನೆ ಕಾಣಿಸುತ್ತದೆ . ಶಾಲಿನಿ ,ಮತ್ತು ಯಮುನಜ್ಜಿ ಪಾತ್ರಗಳು ಗಮನ ಸೆಳೆಯುವಂತಿದೆ ... ಎಂದೋ ತೀರಿ ಹೋದ ಯಮುನಜ್ಜಿ ಅಕ್ಕ ಗಂಗಜ್ಜಿಯ ಇಷ್ಟದ ತಿನಿಸಾದ ಪತ್ರೊಡೆಯನ್ನ ಆಕೆಯ ಶ್ರಾದ್ದದ ದಿನವಾದ ಅಂದು ಮಾಡಿ ಬಡಿಸ ಬೇಕು ಎಂಬ ಆಸೆ ಯಮುನಜ್ಜಿಗೆ ..... ಒಟ್ಟಿನಲ್ಲಿ ಶಾಲಿನಿಯ ಗೊಣಗಾಟದ ನಡುವೆಯೇ ಪತ್ರೊಡೆ ಮಾಡಿ ಪಿಂಡಕ್ಕೆ ಬಡಿಸುತ್ತಾಳೆ, ನಂತರ ಸೊಸೆ ಮಾಡಿದ ಪತ್ರೊಡೆ ರುಚಿಗೆ ಮನಸೋತು ಗಬ ಗಬನೆ ತಿನ್ನುವ ಯಮುನಜ್ಜಿ ಕಾ ಕಾ ಎನ್ನುವ ಕಾಗೆಯನ್ನ ಎಡ ಕೈನಿಂದ ಹಚ ಹಚ ಎಂದು ಓಡಿಸುತ್ತ ಪತ್ರೊಡೆಯ ಒಗರು ಒಗರು ರುಚಿಗೆ ಮರುಳಾಗಿ ಅದನ್ನ ತಿನ್ನೋದು ...ಕಥೆಯ ಬಗ್ಗೆ ಇನ್ನೊಮ್ಮೆ ಮಾತಾಡೋಣ ..ನಂಗೆ ಈ ಕಥೆ ಓದಿ ಮುಗಿಸಿದ ಮೇಲೆ ಪತ್ರೊಡೆ ತಿನ್ನ ಬೇಕು ಅಂತ ಆಸೆಯಾಗ್ತಾ ಇದೆ ..ಅಂದ ಹಾಗೆ ಅದೇ ಸಂಕಲನದಲ್ಲಿ ಇನ್ನು ಹಲವಾರು ಚಂದದ ಕಥೆಗಳಿವೆ ಅದು ಕಡಮೆಯವರ ೨ನೆ ಕಥಾ ಸಂಕಲನ ಪ್ರಥಮ ಮುದ್ರಣ ೨೦೦೮ ರಲ್ಲಾಗಿದೆ ಸಿಕ್ಕರೆ ಅಕ್ಕರೆಯಿಂದ ಕೈಗೆತ್ತಿಕೊಳ್ಳಿ

1 ಕಾಮೆಂಟ್‌(ಗಳು):

Deepasmitha ಹೇಳಿದರು...

ಪುಸ್ತಕ ಸಿಕ್ಕರೆ ಓದಬೇಕೆನಿಸಿದೆ. ಪತ್ರೊಡೆ ನನಗೂ ಇಷ್ಟ. ಸರಿಯಾದ ಕೆಸುವಿನ ಎಲೆ ಉಪಯೋಗಿಸದಿದ್ದರೆ ಬಾಯಿ ತುರಿಸುತ್ತದೆ